ಖೋರ್ತಾ (ಕೋರ್ತಾ ಅಥವಾ ಖೋಟ್ಟಾ ಎಂದೂ ರೋಮನೀಕರಿಸಲಾಗಿದೆ) ಪರ್ಯಾಯವಾಗಿ ಪೂರ್ವ ಮಗಾಹಿ ಎಂದು ವರ್ಗೀಕರಿಸಲಾಗಿದೆ. ಇದು ಭಾರತದ ಜಾರ್ಖಂಡ್ ರಾಜ್ಯದಲ್ಲಿ ಮುಖ್ಯವಾಗಿ ಉತ್ತರ ಛೋಟಾನಾಗ್ಪುರ, ಪಲಾಮು ವಿಭಾಗ ಮತ್ತು ಸಂತಾಲ್ ಪರಗಣ ಎಂಬ ಮೂರು ವಿಭಾಗಗಳಿದ್ದು, ೧೬ ಜಿಲ್ಲೆಗಳಲ್ಲಿ ಮಾತನಾಡುವ ಮಗಾಹಿ ಭಾಷೆ ಉಪಭಾಷೆ ಎಂದು ಪರಿಗಣಿಸಲ್ಪಟ್ಟಿದೆ. ಖೋರ್ತಾವನ್ನು ಸದಾನ್ಸ್ ಜನರು ಸ್ಥಳೀಯ ಭಾಷೆಯಾಗಿ ಮಾತನಾಡುತ್ತಾರೆ. ಬುಡಕಟ್ಟು ಜನರು ಸಂಪರ್ಕ ಭಾಷೆಯಾಗಿ ಬಳಸುತ್ತಾರೆ. ಇದು ಜಾರ್ಖಂಡ್‌ನಲ್ಲಿ ಹೆಚ್ಚು ಮಾತನಾಡುವ ಭಾಷೆಯ ವೈವಿಧ್ಯವಾಗಿದೆ. == ಭೌಗೋಳಿಕ ಹಂಚಿಕೆ == ಜಾರ್ಖಂಡ್‌ನ ಉತ್ತರ ಛೋಟಾ ನಾಗ್ಪುರ ವಿಭಾಗ ಮತ್ತು ಸಂತಾಲ್ ಪರಗಣ ವಿಭಾಗಗಳಲ್ಲಿ ಖೋರ್ತಾವನ್ನು ಮಾತನಾಡಲಾಗುತ್ತದೆ. ಆ ಏಳು ಜಿಲ್ಲೆಗಳೆಂದರೆ ಹಜಾರೀಬಾಗ್, ಕೊಡೆರ್ಮಾ, ಗಿರಿದಿಹ್, ಬೊಕಾರೋ, ಧನ್ಬಾದ್, ಚತ್ರಾ, ರಾಮಗಢ. ಖೋರ್ತಾ ಮಾತನಾಡುವ ಜಿಲ್ಲೆಗಳಲ್ಲಿ ಔರಂಗಾಬಾದ್, ಗಯಾ ಮತ್ತು ನವಾಡಾ ಸೇರಿವೆ. == ವರ್ಗೀಕರಣ == ಗ್ರಿಯರ್ಸನ್ ತನ್ನ ಭಾಷಾ ಸಮೀಕ್ಷೆಯಲ್ಲಿ ಖೋರ್ತಾವನ್ನು ಮಗಾಹಿ ಭಾಷೆ ಉಪಭಾಷೆ ಎಂದು ವರ್ಗೀಕರಿಸಿದ್ದಾನೆ. ಇತ್ತೀಚಿನ ಅಧ್ಯಯನವು, ಖೋರ್ತಾ ಭಾಷೆಯು ಮಗಾಹಿ ಭಾಷೆಗಿಂತ ಜಾರ್ಖಂಡ್ ಸದನಿ ಎಂದು ಕರೆಯಲ್ಪಡುವ ಇತರ ಬಿಹಾರಿ ಭಾಷೆಗಳನ್ನು ಹೋಲುತ್ತದೆ ಎಂಬುದನ್ನು ತೋರಿಸುತ್ತದೆ. == ಸಾಹಿತ್ಯ == ೧೯೫೦ರಲ್ಲಿ ಶ್ರೀನಿವಾಸ ಪಾನೂರಿ ಅವರು ಕಾಳಿ ದಾಸ್ ಅವರ ಮೇಘದೂತವನ್ನು ಖೋರ್ತಾದಲ್ಲಿ ಅನುವಾದಿಸಿದರು. ೧೯೫೬ರಲ್ಲಿ ಆತ ಬಾಲಕಿರಣ್ ಮತ್ತು ದಿವ್ಯಜ್ಯೋತಿ ಎಂಬ ಎರಡು ಕೃತಿಗಳನ್ನು ರಚಿಸಿದರು. ಭುವನೇಶ್ವರ ದತ್ತ ಶರ್ಮಾ, ಶ್ರೀನಿವಾಸ್ ಪನೂರಿ, ವಿಶ್ವನಾಥ ದಾಸೌಂದಿ ಮತ್ತು ವಿಶ್ವನಾಥ ನಗರ ಅವರು ಖೋರ್ತಾದಲ್ಲಿ ಸಾಹಿತ್ಯವನ್ನು ಪ್ರಾರಂಭಿಸಿದ ಮೊದಲ ವ್ಯಕ್ತಿಗಳಲ್ಲಿ ಸೇರಿದ್ದಾರೆ. ಖೋರ್ತಾ ಭಾಷೆಯ ಕೆಲವು ಪ್ರಮುಖ ಬರಹಗಾರರೆಂದರೆ ಎ. ಕೆ. ಝಾ., ಶಿವನಾಥ್ ಪ್ರಮಾಣಿಕ್, ಬಿ. ಎನ್. ಒಹ್ದಾರ್. ಮೊದಲ ಬಾರಿಗೆ, ಜಾರ್ಖಂಡ್‌ನ ಜನರಿಗೆ ಅಂತರ್ಜಾಲದ ಮೂಲಕ ಖೋರ್ತಾ ಭಾಷೆ ಮತ್ತು ಸಾಹಿತ್ಯವನ್ನು ತಲುಪಲು ಸರ್ಕಾರಿ ಗ್ರಂಥಾಲಯದ ಸಂಸ್ಥಾಪಕ ಶ್ರೀ ಮನನ್ಜಯ್ ಮಹತೋ ಅವರು ಪ್ರಯತ್ನಗಳನ್ನು ಮಾಡಿದರು. .ಶ್ರೀ ಮನನ್ಜಯ್ ಮಹತೋ ಅವರ ಪ್ರಯತ್ನದಿಂದಾಗಿ ಮೊದಲ ಬಾರಿಗೆ ಅಂತರ್ಜಾಲದಲ್ಲಿ ಖೋರ್ತಾ ಸಾಹಿತ್ಯವು ಲಭ್ಯವಾಯಿತು. == ಮಾದರಿ ನುಡಿಗಟ್ಟುಗಳು == == ಇದನ್ನೂ ನೋಡಿ == ಖೋರ್ತಾ ಸಿನೆಮಾ 2021-2022 ಜಾರ್ಖಂಡ್ನಲ್ಲಿ ಭಾಷಾ ಚಳುವಳಿ == ಉಲ್ಲೇಖಗಳು ==